ಕಮಾಂಡ್ : ಒಬ್ಬ ಸೇನಾಪತಿಯ ಕೈಕೆಳಗಿರುವ ಅನೇಕ ಪಡೆಗಳನ್ನು ಒಟ್ಟಾಗಿ ನಿರ್ದೇಶಿಸುವ ಪದ. ಅನೇಕ ವೇಳೆ ಈ ಪದವನ್ನು ಬಗೆಬಗೆಯ ಸೇನಾವಿಭಾಗಗಳ (ಡಿವಿಶನ್ಸ್‌) ಪಡೆಗಳು (ಯೂನಿಟ್ಸ್‌) ಇರುವ ಪ್ರದೇಶವನ್ನು ಸೂಚಿಸುವುದಕ್ಕೆ ಬಳಸುತ್ತಾರೆ. ಉದಾಹರಣೆಗೆ 
ಪಶ್ಚಿಮ ಸೇನಾವಲಯ (ವೆಸ್ಟರ್ನ್ ಕಮಾಂಡ್), ದಕ್ಷಿಣ ಸೇನಾವಲಯ (ಸದರ್ನ್ ಕಮಾಂಡ್), ಪುರ್ವ ಸೇನಾವಲಯ (ಈಸ್ಟರ್ನ್ ಕಮಾಂಡ್)-ಈ ಪ್ರಕಾರ ನಮ್ಮ ಸೇನೆ ಪ್ರಾದೇಶಿಕವಾಗಿ ವಿಭಾಗಗೊಂಡಿದೆ. ಅಲ್ಲದೆ ಈ ಶಬ್ದವನ್ನು ಒಬ್ಬ ಅಧಿಕಾರಿ ಯಾವುದಾದರೊಂದು 
ಕಾರ್ಯವನ್ನು ಮಾಡುವಂತೆ ಕೊಡುವ ಆಜ್ಞೆಗೂ ಬಳಸುತ್ತಾರೆ.  *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ